ನಮ್ಮ ಸಮಕಾಲೀನ ಬರಹಗಾರರ ಬಗ್ಗೆ ನಮಗೆಷ್ಟು ಗೊತ್ತು? ನಮ್ಮ ತಲೆಮಾರಿನ ಸಾಹಿತಿಗಳು, ಸಾಹಿತ್ಯದ ಬಗ್ಗೆ ಎಷ್ಟು ಗೊತ್ತು? ನಾವು ಈ ತಲೆಮಾರಿನ, ತಲೆಮಾರಿನ ಹಿರಿಯರ ರಚನೆಗಳನ್ನು ಎಷ್ಟರಮಟ್ಟಿಗೆ ಓದಿಕೊಂಡಿದೇವೆ? ಈ ಪ್ರಶ್ನೆಗಳು ಎದುರಾದಾಗಿನಿಂದ, ಅದನ್ನೆಲ್ಲ ಅರಸಿ ತಂದು ಓದಬೇಕೆನ್ನುವ ಹಂಬಲ ಶುರುವಾಯ್ತು. ಆದರೆ ಹೀಗೆ ಎಲ್ಲರನ್ನೂ, ಎಲ್ಲವನ್ನೂ ಒಟ್ಟುಮಾಡುವುದು ಬಹಳ ಕಷ್ಟದ ಕೆಲಸ. ಅದಕ್ಕೆಂದೇ ಈ ವೇದಿಕೆ. ನಮ್ಮಲ್ಲಿರುವುದನ್ನು ಹಂಚಿಕೊಂಡು ನಿಮ್ಮಿಂದ ಪಡೆಯುವ, ಕೊಡುಕೊಳ್ಳುವಿಕೆಯ ಬೆಸುಗೆಗೊಂದು ತಾಣವಿದಾಗಲೆಂಬ ಉದ್ದೇಶ.
ಈ ನಡುವೆ ತಮ್ಮ ಬರಹಗಳನ್ನು ಅನುಮತಿಯಿಲ್ಲದ ಪ್ರಕಟಿಸಿದ ಆಕ್ಷೇಪ ಯಾರಿಗಾದರೂ ಉಂಟಾದರೆ ದಯವಿಟ್ಟು rutaadar143@gmail.comಗೆ mail ಮಾಡಿ. ಮುಂಚಿತವಾಗಿ ನಿಮ್ಮ ಕ್ಷಮೆ ಕೇಳಿರುತ್ತೇವೆ. ಮತ್ತೆ ಕ್ಷಮೆ ಕೋರಿ ಗೌರವದಿಂದಲೇ ಅದನ್ನು ತೆಗೆಯಲಾಗುವುದು. ನಮ್ಮ ಜೊತೆಯ ಬರಹಗಾರರು ಏನೆಲ್ಲ ಬರೆಯುತ್ತಿದ್ದಾರೆ, ಹೇಗೆ ಚಿಂತಿಸುತ್ತಾರೆ, ಸಮಾಜದ ಆಗುಹೋಗುಗಳಿಗೆ ಹೇಗೆಲ್ಲ ಸ್ಪಂದಿಸುತ್ತಾರೆ ಎನ್ನುವುದನ್ನು ಅರಿಯಲು, ಹಂಚಿಕೊಳ್ಳಲು ಇದು ನೆರವಾಗಲೆನ್ನುವುದು ಈ ಬ್ಲಾಗ್ ನ ಮುಖ್ಯ ಕಾಳಜಿ.
ಜೊತೆಗೇ ತಲೆಮಾರಿನ ಹಿರಿಯರ ಬರಹಗಳೂ ಇದರಲ್ಲಿ ಪುನಃ ಪ್ರಕಟವಾಗಲಿವೆ. ಅವುಗಳನ್ನು ಯಾವ ಮೂಲದಿಂದ ಆರಿಸಿಕೊಂಡಿದೇವೆ ಅನ್ನುವುದನ್ನು ನಮೂದಿಸಲು ಮರೆಯುವುದಿಲ್ಲ. ದಯವಿಟ್ಟು ಸಹಕರಿಸಿ.
ಇವೆಲ್ಲದರ ಜೊತೆಗೆ ಹಿಂದಿನ ಲೇಖಕರ, ಚಿಂತಕರ ಬರಹ, ಅನುವಾದ ಇತ್ಯಾದಿಗಳನ್ನೂ ಇಲ್ಲಿ ಹಾಕುವ ಉದ್ದೇಶವಿದೆ. ಯೋಜನೆಯೇನೋ ದೊಡ್ಡದೇ. ಬಹಳ ಪ್ರೀತಿಯಿಂದ ಶುರು ಮಾಡ್ತಿರುವಂಥದೇ. ನಿಮ್ಮ ಪ್ರತಿಕ್ರಿಯೆ ಮಾತ್ರವೇ ಇದನ್ನು ಪೂರ್ಣಗೊಳಿಸಬಲ್ಲದು ಎನ್ನುವ ನಂಬಿಕೆ ನಮ್ಮದು.
ಪ್ರೀತಿಯಿರಲಿ.
ಋತಾ